16th October 2024
ಬೆಳಗಾವಿಯಲ್ಲಿ ವಾರ್ಷಿಕ ಬೆಲಾ ಬಜಾರ 2024..
ದಿನಾಂಕ 18 ರಿಂದ 22ರವರೆಗೆ ಬೆಳಗಾವಿ ಬೇನನಸ್ಮಿತ್ ಮೈದಾನದಲ್ಲಿ..
ಮಹಿಳಾ ಉತ್ಪನ್ನಗಳ 130ಕ್ಕೂ ಹೆಚ್ಚುಮಳಿಗೆಗಳ ಭವ್ಯ ಪ್ರದರ್ಶನ ಮತ್ತು ಮಾರಾಟ..
ಬೆಳಗಾವಿ : ನಗರದ ಬೇನನಸ್ಮಿತ್ ಕಾಲೇಜು ಮೈದಾನದಲ್ಲಿ ಇದೇ ತಿಂಗಳು ದಿನಾಂಕ 18 ರಿಂದ 22ರ ವರೆಗೆ, ಬೆಳಗಾವಿಯ ಲೇಡೀಸ್ ಅಸೋಸಿಯೇಷನ್ ತನ್ನ ವಾರ್ಷಿಕ “ಬೆಳಗಾವಿ ಬೇಲಾ ಬಜಾರ್ 2024” ಅನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಇಲ್ಲಿ ಮಹಿಳಾ ಆಸಕ್ತಿಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಅತ್ಯುನ್ನತ ಮಟ್ಟದಲ್ಲಿ ನಡೆಯುತ್ತಿದ್ದು, ಬೆಳಗಾವಿ ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಬೇಲಾ ಸಮೂಹದ ಮುಖ್ಯೆಸ್ಥೆ ಲಕ್ಷ್ಮಿ ಕಿಲಾರಿ ತಿಳಿಸಿದ್ದಾರೆ.
ರಂದು ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಲಾ ಬೆಳಗಾವಿ ಹಾಗೂ ಬೆಳಗಾವಿ ಲೇಡೀಸ್ ಅಸೋಸಿಯೇಷನ್ ತನ್ನ ವಾರ್ಷಿಕ ಬೇಲಾ ಬಜಾರ 2024 ಅನ್ನು ಐದು ದಿನಗಳ ಕಾಲ ಬೇನನ ಸ್ಮಿತ್ ಮೈದಾನದಲ್ಲಿ ನಡೆಸುತ್ತಿದ್ದು, ಇದು ಮಹಿಳಾ ಉದ್ಯಮಿಗಳಿಗೆ ಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ಈ ಕಾರ್ಯಕ್ರಮದಿಂದ 100 ಜನ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಮತ್ತು ಮಹಿಳಾ ಸಬಲೀಕರಣದ, ಉದ್ಯೋಗದ, ಶಿಕ್ಷಣದ ಉತ್ತೇಜನಕ್ಕೆ ಸಹಕಾರಿಯಾಗಿದೆ ಎಂದಿದ್ದಾರೆ, ಇದು ಮಹಿಳಾ ಉದ್ಯಮಿಗಳ ಬೆಳವಣಿಗೆ, ಮನೋಭಾವ ವೃದ್ಧಿ, ಸೃಜನಶೀಲತೆ, ಮತ್ತು ಮಾರುಕಟ್ಟೆ ವಿಸ್ತರಣೆಯ ವಿಧಾನವನ್ನು ಬೆಳೆಸುವ ಸ್ಥಳಾವಕಾಶ ಒದಗಿಸುತ್ತದೆ ಎಂದರು.
ಈ ಮೇಳದಲ್ಲಿ ಮಹಿಳೆಯರ ಒಟ್ಟು 130 ಕ್ಕೂ ಹೆಚ್ಚು ಮಳಿಗೆಗಳು, ಲೈವ್ ಮನರಂಜನೆ, ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ಇಂಟರ್ ಸ್ಕೂಲ್ ಹಾಗೂ ಕಾಲೇಜುಗಳ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು, ಸುಶೀಲ್ ಜೈಸ್ವಾಲ್ ಮತ್ತು ರಾಜಸ್ಥಾನಿ ಜಾನಪದ ತಂಡದಿಂದ ಇಂಡಿಯಾಸ್ ಗಾಟ್ ಟ್ಯಾಲೆಂಟನಿಂದ ಪ್ರದರ್ಶನಗಳು ಲಭ್ಯವಿವೆ ಎಂದಿದ್ದಾರೆ..
ಬೇಲಾ ಬಜಾರ್ ಮಹಿಳಾ ಉದ್ಯಮಿಗಳಿಗೆ ಉತ್ತೇಜನೆ ನೀಡುವದು ಮಾತ್ರವಲ್ಲದೇ, ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಯಾಣ, ಶಿಕ್ಷಣದ ಉತ್ಸಾಹ, ಸ್ಪೂರ್ತಿಯನ್ನು ನೀಡುತ್ತದೆ ಎಂದಿದ್ದಾರೆ..
ಮಕ್ಕಳ ಕಲಾ ಶಿಬಿರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್